
19th December 2024
ವಾ.ವಿ.ಸಂ.81
ವಾಹನಗಳಲ್ಲಿ ಮಕ್ಕಳನ್ನು ಮತ್ತೊಮ್ಮೆ ಕೆಲಸಕ್ಕೆ ಕರೆದುಕೊಂಡು ಹೋದಲ್ಲಿ :
ವಾಹನಗಳನ್ನೂ ಸೀಜ್ ವಾಹನಗಳ ಮಾಲೀಕರಿಗೆ ಇದೇ ಸಂದರ್ಭದಲ್ಲಿ ಕಠಿಣ ಎಚ್ಚರಿಕೆ
ಯಾದಗಿರಿ : ಡಿಸೆಂಬರ್ 19, (ಕ.ವಾ) : ವಾಹನಗಳಲ್ಲಿ ಮಕ್ಕಳನ್ನು ಮತ್ತೊಮ್ಮೆ ಕೆಲಸಕ್ಕೆ ಕರೆದುಕೊಂಡು ಹೋದಲ್ಲಿ ತಮ್ಮ ತಮ್ಮ ವಾಹನಗಳನ್ನೂ ಸೀಜ್ ಮಾಡಲಾಗುವುದೆಂದು ವಾಹನಗಳ ಮಾಲೀಕರಿಗೆ ಇದೇ ಸಂದರ್ಭದಲ್ಲಿ ಕಠಿಣ ಎಚ್ಚರಿಕೆ ನೀಡಿಲಾಯಿತು ಎಂದು ಮೋಟಾರ್ ವಾಹನ ನಿರೀಕ್ಷಕರಾದ ಅಯ್ಯಾಳಪ್ಪ ಅವರು ಹೇಳಿದರು.
ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದ ಮಾರ್ಗವಾಗಿ ಆಟೋ, ಟಂಟAಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಠಾತ್ ದಾಳಿಯನ್ನು ಕೈಗೊಂಡು ಕೂಲಿ ಕೆಲಸಕ್ಕಾಗಿ 8 ಆಟೋ, ಟಂಟAಗಳಲ್ಲಿ ತೆರಳುತ್ತಿದ್ದ ಸುಮಾರು 14 ಮಕ್ಕಳನ್ನು ರಕ್ಷಿಸಿ, ಮಕ್ಕಳನ್ನು ಮತ್ತೊಮ್ಮೆ ಕೆಲಸಕ್ಕೆ ಕಳುಹಿಸದಂತೆ ಪಾಲಕ, ಪೋಷಕರು ಹಾಗೂ ಆಟೋ, ಟಂಟAಗಳ ಚಾಲಕರಿಗೆ ಜಾಗೃತಿ ಮೂಡಿಸಿ ಪುನಃ ಗ್ರಾಮಕ್ಕೆ ಕಳುಹಿಸಲಾಯಿತು.
ಯಾದಗಿರಿ ಕಾರ್ಮಿಕ ನಿರೀಕ್ಷಕರಾದ ಶ್ರೀಮತಿ ಸಾಬೇರಾ ಬೇಗಂ ಅವರು ಮಾತನಾಡಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ 20,000 ರೂ.ಗಳಿಂದ 50,000 ರೂ.ಗಳವರೆಗೆ ದಂಡ ಮತ್ತು 6 ತಿಂಗಳಿAದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನು ಸಹ ವಿಧಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಶ್ರೀ ರಿಯಾಜ್ ಪಟೇಲ್ ವರ್ಕನಳ್ಳಿ ಅವರು ಮಾತನಾಡಿ ಆಟೋ, ಟಂಟAಗಳಲ್ಲಿ ಕೂಲಿ ಕೆಲಸಕ್ಕಾಗಿ ಕರೆದುಕೊಂಡು ಹೋಗಬಾರದೆಂದು ಕಾರ್ಮಿಕ ಇಲಾಖೆಯಿಂದ ನಿರÀಂತರವಾಗಿ ಜನ-ಜಾಗೃತಿ, ಕಾನೂನು ಅರಿವು-ನೆರವು ಕಾರ್ಯಕ್ರಮ, ಬೀದಿನಾಟಕಗಳನ್ನು ನಡೆಸಲಾಗುತ್ತಿದೆ. ಇದನ್ನು ಮೀರಿಯೂ ಸಹ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ ಮತ್ತು ಮಕ್ಕಳನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುವ ಆಟೋ, ಟಂಟAಗಳ ಚಾಲಕರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.
ಹಠಾತ್ ದಾಳಿ ಸಂಧರ್ಭದಲ್ಲಿ ಮೋಟಾರ್ ವಾಹನ ನಿರೀಕ್ಷಕರಾದ ಚಂದ್ರಕಾAತ, ಆರ್.ಟಿ.ಓ ವಾಹನ ಚಾಲಕರಾದ ಮಾಳಪ್ಪ, ಸಾಗರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು, ಮಕ್ಕಳ ರಕ್ಷಣಾ ಘಟಕದ ಪರ್ವತರೆಡ್ಡಿ, ಮಕ್ಕಳ ಸಹಾಯವಾಣಿ 1098ನ ಶೃತಿ, ಸನ್ ರೈಜ್ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ)ನ ಅಧ್ಯಕ್ಷರಾದ ಖಾಸಿಂ ಅಲಿ, ಸಮಾಜ ಸೇವಕರಾದ ಜಿಂದಾವಲಿ ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.